ಶುಕ್ರವಾರ, ಏಪ್ರಿಲ್ 10, 2009

ಏನ ಹೇಳಲಿ ನಾನು?




ಏನ ಹೇಳಲಿ ನಾನು
ಪಕ್ಕದ ಮನೆಯವರು
ನಮ್ಮನ್ನು ಚಹಾಕ್ಕೆ
ಕರೆಯಲು ಬಂದರೆ?

ಅವರಿಗೆ ಗೊತ್ತಿಲ್ಲ
ನನ್ನೊಂದಿಗೆ ನೀನಿಲ್ಲವೆಂದು.
ಏನ ಹೇಳಲಿ ನಾನು
ಫೋನು ರಿಂಗಣಿಸಿ
ಯಾರಾದರೂ ನಿನ್ನ ಕೇಳಿದರೆ?
ಅವರಿಗೆ ಗೊತ್ತಿಲ್ಲ ನಾನೂ
ಸಹ ನಿನ್ನ ಕೇಳುತ್ತಿದ್ದೇನೆಂದು.

ಏನ ಹೇಳಲಿ ನಾನು
ಯಾರಾದರು ನನ್ನ ಸುರಿಯುವ
ಕಣ್ಣೀರನ್ನು ನೋಡಿದರೆ?
ಹೇಗೆ ಹೇಳಲಿ ಅವರಿಗೆ
ನೀನಿಲ್ಲದೆ ನನ್ನ ಹೃದಯ
ನಿದುಸುಯ್ಯುತ್ತಿದೆ ಎಂದು?

ಏನ ಹೇಳಲಿ ನಾನು
ಯಾರಾದರು ನಿನ್ನ ಕೇಳಿದರೆ?
ಹೇಳಬಲ್ಲೆ ವಾರದ ಮಟ್ಟಿಗೆ
ಹೊರಗೆ ಹೋಗಿದ್ದೀಯ ಎಂದು.
ಆದರೆ ವಾರ ಕಳೆದ ಮೇಲೆ
ಏನ ಹೇಳಲಿ ನಾನು?

ಇಂಗ್ಲೀಷ ಮೂಲ: ಪೀಟರ್ ಟುಂಟರಿನ್
ಕನ್ನಡಕ್ಕೆ: ಉದಯ ಇಟಗಿ

6 ಕಾಮೆಂಟ್‌ಗಳು:

  1. ಕಲಿಗಣನಾಥವರೆ,
    ನೀವು "ಅವಧಿ"ಯಲ್ಲಿ ನನ್ನ ಅನುವಾದದ ಕವನವನ್ನು ನೋಡಿ ಅದನ್ನು ಕಳಿಸಿ ಎಂದು ವಿನತಿಸಿಕೊಂಡಿದ್ದಿರಿ. ಆ ಪ್ರಕಾರ ಕಳಿಸಿಕೊಟ್ಟಿದ್ದೆ. ಇದೀಗ ಅದನ್ನು ನಿಮ್ಮ ಬ್ಲಾಗಲ್ಲಿ ಹಾಕಿರುವಿರಿ. ಆದರೆ ಆ ಕವನದ ಹಿಂದೆ ನಿಮ್ಮ ಇಷ್ಟೊಂದು ನೋವು ಅಡಗಿದೆ ಎಂದು ಗೊತ್ತಿರಲಿಲ್ಲ. ಕಳೆದುಕೊಂಡಿದ್ದು ಮತ್ತೆ ಸಿಗುವದಿಲ್ಲವಾದ್ದರಿಂದ ನಿಮಗೆ ಆ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಆಸಿಸುವೆ. ಜೊತೆಗೆ ನನ್ನದೂ ಒಂದು ಸಂತಾಪವನ್ನು ಸೂಚಿಸುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  2. ಉದಯ್ ಸರ್ ಯುವಕವಿಯಲ್ಲಿ ಕವನಗಳನ್ನು ಅನುವಾದಿಸಿ ಹಾಕುತ್ತಿರುತ್ತಾರೆ. ನಾವು ಓದುತ್ತಾ ಇರ್ತೀವೆ. ಒಳ್ಳೆಯ ಕವನ.
    -ಧರಿತ್ರಿ

    ಪ್ರತ್ಯುತ್ತರಅಳಿಸಿ
  3. ಓದಿ ಮುಗಿಯುವ ಹೊತ್ತಿಗೆ ಕಣ್ಣು ತುಂಬಾ ನೀರು...

    ಪ್ರತ್ಯುತ್ತರಅಳಿಸಿ
  4. ಗಣನಾಥ, ಬೇರೆಯವರು ಅನುವಾದಿಸಿದ ಪದ್ಯವನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿ ನಿಮ್ಮ ಸಹೃದಯತೆಯನ್ನು ಮೆರೆದಿದ್ದೀರಿ. ನಿಮ್ಮ ಬಗ್ಗೆ ನನಗಿರುವ ಗೌರವ ಇಮ್ಮಡಿಯಾಗಿದೆ. -- ಆಸಕ್ತ ಓದುಗ

    ಪ್ರತ್ಯುತ್ತರಅಳಿಸಿ
  5. ಮಿತ್ರ ಕಲಿಗಣನಾಥ, ತಾವಿನ್ನೂ ಮೌನದ ಮುಸಕನ್ನು ಹೊದ್ದು ಕುಳಿತಿದ್ದೀರಿ. ಸಿದ್ದಮುಖಿಯವರ ಪ್ರಶ್ನೆಗಳು ಅರ್ಥಹೀನವೆ? ಬಾಲಿಶವೆ? ತಮ್ಮಂತಹ ಸಹೃದಯ ಪ್ರಜ್ಞೆವುಳ್ಳ ದಲಿತ ಹಿತಾಕಾಂಕ್ಷಿಗಳೇ ದಿವ್ಯ ಮೌನ ವಹಿಸಿದರೆ ಇನ್ನು ದಲಿತರ ನಿಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವವರು ಯಾರು? -- ಆಸಕ್ತ ಓದುಗ

    ಪ್ರತ್ಯುತ್ತರಅಳಿಸಿ