ಭಾನುವಾರ, ಮಾರ್ಚ್ 29, 2009

ಕನ್ನಡಪ್ರಭ ಪತ್ರಿಕೆ ಸಾಪ್ತಾಹಿಕ ಪ್ರಭ (29.03.2009)ದ 'ಸನ್ನಿಧಾನ'ದಲ್ಲಿ ವಿದ್ಯಾರಶ್ಮಿ ನಡೆಸಿದ ಕಿರು ಸಂದರ್ಶನ

ನೀವೇಕೆ ಬರೆಯುತ್ತೀರಿ? ನಿಮ್ಮ ಸಾಹಿತ್ಯ ರಚನೆಗೆ ಸ್ಫೂತರ್ಿ ಏನು?
- ಬರೆಯುವುದು ಕೇವಲ ಹವ್ಯಾಸ ಅನ್ನಿಸಲ್ಲ. ತುಡಿತ ಮತ್ತು ಕುದಿವ ಭಾವನೆಗಳ ಅಕ್ಷರ ಹಾಗೂ ಓದಲು, ಚಚರ್ಿಸಲು ಬರುವ ರೂಪ. ಸಾಮಾಜಿಕ ಜವಾಬ್ದಾರಿ. ಕಲಿತ ಅಕ್ಷರ ಓದಲು ಬರೆಯಲು ನೌಕರಿ ಹಿಡಿಯಲಷ್ಟೆ ಅಲ್ಲವಲ್ಲ. ಸುತ್ತಲಿನ ಹಲವು ಸಂಗತಿಗಳು ಮತ್ತು ಜಗದ ಜಂಜಡ ಹಾಗೂ ಸವಾಲುಗಳಿಗೆ ಪ್ರತಿಕ್ರಿಯಿಸುವ ಹಂಬಲ. ಮನೆ, ತಂದೆ, ತಾಯಿ, ಅಕ್ಕ, ಊರು, ಹೊಲ, ಗದ್ದೆ, ದುಡಿಯುವ ಜನ, ಜಗತ್ತನ್ನು ಕಾಡುತ್ತಿರುವ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ತಂದೊಡ್ಡಿರುವ ಬಗೆಹರಿಸಲಾಗದ ತೊಂದರೆಗಳು ಅಸಹಾಯಕ ಸಕರ್ಾರಗಳು, ನಿರ್ಲಜ್ಜ ರಾಜಕಾರಣಿಗಳು, ಸೊಫಿಸ್ಟಿಕೇಟಡ್ ಬದುಕಿಗೆ ಜೋತುಬಿದ್ದು ಮನುಷ್ಯತ್ವ ಮರೆತ ಜನ, ದೇವರು, ಧರ್ಮ, ಜಾತಿ, ಭಾಷೆ, ಪ್ರಾಂತೀಯತೆ ಹಂಗಿನಿಂದ ಕಂಗೆಟ್ಟ ಜಗತ್ತು, ಹೀಗೆ ಹಲವು ಸಂಗತಿಗಳು ಸಾಹಿತ್ಯ ರಚನೆಗೆ ಸ್ಫೂತರ್ಿ. ಹಿಂದೆಂದಿಗಿಂತ ಇಂದು ಸಾಹಿತ್ಯ ರಚನೆಗೆ ಸ್ಫೂತರ್ಿಯ ಹಲವು ಸಂಗತಿಗಳು ಹೆಚ್ಚುತ್ತಿವೆ.
ಮೊದಲ ಕಥೆ / ಕವನ ಪ್ರಕಟವಾದ ನೆನಪು....
- ಪಿಯುಸಿಯಿಂದಲೇ ಸಾಹಿತ್ಯ ಓದುವ ಹುಚ್ಚು ಬೆಳೆಯಿತು. ಬಿ.ಎ. ಓದುತ್ತಿದ್ದಾಗ ಕೆಲವು ಕಥೆಗಳನ್ನು ಬರೆದನಾದರೂ ಪ್ರಕಟಣೆಗೆ ಕಳಿಸಿದ ಕಥೆಗಳು ವಿಷಾದದ ಪತ್ರ ಹೊತ್ತು ಬಂದು ನಿನಗೆ ಕಥೆ ಬರೆಯಲು ಬರುವುದಿಲ್ಲ ಎಂದೇ ಹೀಯಾಳಿಸಿದವು. ಅದೇ ಕಥೆಗಳನ್ನು ಸಾಮಾನ್ಯ ಪ್ರಕಟಣೆಗೆ ಕಳುಹಿಸದೆ ಕಥಾಸ್ಪಧರ್ೆಗೆ ಕಳಿಸಿದೆ. ಪ್ರಜಾವಾಣಿ ದೀಪಾವಳಿ ಕಥಾಸ್ಪಧರ್ೆ-1997ರಲ್ಲಿ ವಿದ್ಯಾಥರ್ಿ ವಿಭಾಗಕ್ಕೆಂದು ಉಡಿಯಲ್ಲಿಯ ಉರಿ ಕಥೆ ಕಳಿಸಿದೆ. ಬಹುಮಾನ ಕುರಿತು ಗೆಳೆಯನೊಬ್ಬ ಸುದ್ದಿಮುಟ್ಟಿಸಿದ. ವಿದ್ಯಾಥರ್ಿ ವಿಭಾಗದಲ್ಲಿ ಬಹುಮಾನ ಬಂದಿರಬೇಕೆಂದೇ ತಿಳಿದಿದ್ದೆ. ಆದರೆ ಸಾರ್ವಜನಿಕ ವಿಭಾಗದ ಕಥೆಗಳೊಂದಿಗೆ ಸ್ಪಧರ್ಿಸಿದ ಕಥೆಗೆ ಮೊದಲ ಬಹುಮಾನ. ಅಬ್ಬಾ ಆ ದಿನ ಸಂಭ್ರಮಿಸಿದ ಕ್ಷಣಗಳು ಈಗಲೂ ಹಚ್ಚಹಸಿರು. ಬೆಟ್ಟದಷ್ಟು ಸಂತಸ, ಸಡಗರ ಅನ್ನಿಸಿದರೂ ಮುಂದಿರುವ ಹಾದಿ ಬಗ್ಗೆ ಆತಂಕ ಕಾಡುತ್ತಿತ್ತು. ಕರ್ಮವೀರದಲ್ಲಿ ಬಿ.ಎ. ಓದುತ್ತಿದ್ದಾಗ ಬರೆದ ಮಕ್ಕಳ ಕವನ ಪ್ರಕಟವಾದಾಗ ಆ ಸಂಚಿಕೆ ಹಿಡಿದು ಗುಡದೂರು ತುಂಬಾ ಓಡಾಡಿ ನನ್ನ ಗೆಳೆಯರಿಗೆ ತೋರಿಸಿ, ಸಂಭ್ರಮಿಸಿದ್ದೆ....
ನಿಮ್ಮ ಕಥೆಗಳಿಗೆ ಕಾಣಿಸುವ ಉರಿಗೆ ಕಾರಣ ಏನು?
-ಬರೆದ 30 ಕಥೆಗಳಲ್ಲಿ ಒಂದಲ್ಲ ಒಂದು ರೀತಿಯಿಂದ ಕಾಣಿಸಿಕೊಳ್ಳುವ ಉರಿಗೆ ಕಾರಣವೆಂದರೆ, ನನ್ನದು ತೀರಾ ಬಡತನದ ಕುಟುಂಬ. ಬಡತನದಲ್ಲೆ ಕಷ್ಟ ನಷ್ಟ ಅನುಭವಿಸಿ ಬೆಳೆದ ನನಗೆ ಸುತ್ತ ಕಂಡಿದ್ದೆ ಉರಿಯಂತಾ ಅನುಭವಗಳು, ಭಾವನೆಗಳು, ಸವಾಲುಗಳು, ಅವುಗಳೇ ಕಥೆಯಲ್ಲಿ ಜಾಗೆ ಪಡೆದವು. ಇವತ್ತಿಗೂ ಉತ್ತಮವಾಗಿ ಬದುಕುವ ಅವಕಾಶವಿದ್ದರೂ ಯಾಕೊ ಮನಸ್ಸು ಒಪ್ಪುತ್ತಿಲ್ಲ. ನಿತ್ಯವೂ ನನಗೆ ಸವಾಲುಗಳಿರಬೇಕು. ಸವಾಲು ಎದುರಿಸಲು ಹೆಣಗಾಡಬೇಕು. ಸುಖಾ ಸುಮ್ಮನೆ ಬದುಕು ನಡೆಸಲು ಯಾಕೊ ಬಲು ಬೇಜಾರು. ನನಗೆ ಸೂಸುವ ತಂಗಾಳಿಯಲ್ಲೂ ಉರಿಯೂ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಇವತ್ತು ಉರಿಯಲ್ಲದೆ ಮತ್ತೇನು ಕಾಣಲು ಸಾಧ್ಯ.
ನಿಮಗಿಷ್ಟವಾದ / ನಿಮ್ಮ ಮೇಲೆ ಪ್ರಭಾವ ಬೀರಿದ ಕೃತಿ?
- ಬಿ.ಎ. ಓದುತ್ತಿದ್ದಾಗ ಗ್ರಂಥಪಾಲಕ ಗುರು ಅಮರೇಶ ಕುಂಬಾರ ನನ್ನ ಓದಿನ ಹಂಬಲವನ್ನು ಬಹು ಪೋಷಿಸಿದರು. ನೆಚ್ಚಿನ ಕಥೆಗಾರ ಕುಂವಿಯವರ ಕಪ್ಪು ಕಾದಂಬರಿ ಈಗಲೂ ನನ್ನನ್ನು ಬಹು ಕಾಡುತ್ತಿರುವ ಹಾಗೂ ಇಷ್ಟದ ಕೃತಿ. ಅಲ್ಲಿ ತೆರೆದುಕೊಳ್ಳುವ ಜಗತ್ತು ನನ್ನ ಸುತ್ತಲಿನ ಪರಿಸರಕ್ಕೂ ವ್ಯತ್ಯಾಸ ಎನಿಸಲಿಲ್ಲ. ಆರಂಭದ ಓದು ಮತ್ತು ಬರೆಹಕ್ಕೆ ದಾರಿಮಾಡಿಕೊಟ್ಟಿತು. ಇದರ ಜೊತೆಗೆ ಕುಂವಿ ಸೇರಿದಂತೆ, ಲಂಕೇಶ, ಅನಂತಮೂತರ್ಿ, ದೇವನೂರು, ಶ್ರೀಕೃಷ್ಣ ಆಲನಹಳ್ಳಿ, ಬೋಳುವಾರು, ವೀಣಾ ಶಾಂತೇಶ್ವರ, ಕಟ್ಟಿಮನಿ, ಕೆರೂರು ವಾಸದೇವಾಚಾರ್ಯ, ಬೆಸಗರಳ್ಳಿ, ನಿರಂಜನ, ಕಟ್ಪಾಡಿ, ಸಾರಾ, ರಾಘವೇಂದ್ರ ಪಾಟೀಲ್, ನುಗಡೋಣಿ, ಮೊಗಳ್ಳಿ ಅವರ ಕಥೆಗಳನ್ನು ಕಂಡರೆ ಸಾಕು ಓದುವ ತುಡಿತ ಇಮ್ಮಡಿಗೊಳ್ಳುತ್ತದೆ. ದಿಗಂಬರ ಕಾವ್ಯ, ರಶಿಯಾದ ಕಥೆಗಳು, ಮಹಾಶ್ವೇತಾ ದೇವಿ, ಕಾಮೂ, ಗಾಕರ್ಿ, ಓ ಹೆನ್ರಿ, ಚೆಕಾಫ್, ವಿಲಯಂ ಶೇಕ್ಸ್ಪೀಯರ್ ಹೀಗೆ ಜನಪರ ಹಾಗೂ ಬದುಕಿನ ಪರ ಬರೆದ ಇನ್ನೂ ಹಲವು ಲೇಖಕರ ಕೃತಿಗಳು ಕಪ್ಪು ಕಾದಂಬರಿಯಷ್ಟೇ ಇಷ್ಟ.
ನಿಮಗಿಷ್ಟವಾದ ನಿಮ್ಮ ಕೃತಿ?
- ಬರೆದಿರುವುದೇ ಮೂರೇ ಕೃತಿಗಳಾಗಿರುವುದರಿಂದ ಮೂರರಲ್ಲಿ ಯಾವುದು ಇಷ್ಟ ಎಂದು ಹೇಳುವುದು ಕಷ್ಟ. ಬರೆಯುವ, ಬೆಳೆಯುವ ತುಡಿತ ಹೊಂದಿದ ನನಗೆ ಮೂರೂ ಇಷ್ಟ. ಹಾಗೆ ಹೇಳಬೇಕೆಂದರೆ ಮೂರು ಕಥಾ ಸಂಕಲನಗಳ ವಿವಿಧ ಬಿಡಿಕಥೆಗಳೇ ನನ್ನನ್ನು ಬಹುವಾಗಿ ಕಾಡುತ್ತವೆ. ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಉಡಿಯಲ್ಲಿಯ ಉರಿ, ಕಾಗದದ ದೋಣಿ, ಮತಾಂತರ, ಹೊಸ ಅಂಗಿ, ಮಣ್ಣು, ಉರಿವ ಕೆಂಡದ ಮೇಲೆ, ಈ ದಾಹ ದೊಡ್ಡದು, ಎರಡು ಪಾರಿವಾಳಗಳು, ಕನ್ನಡಿಯೊಳಗಿನ ಚಿತ್ರಗಳು ಮಾಮೂಲಿ ಗಾಂಧಿ, ಹೀಗೊಂದು ಸಹಜ ಸಾವು, ದೊಡ್ಡವರ ನಾಯಿ ನನಗೆ ಬಹು ಸಮಾಧಾನ ಕೊಟ್ಟ ಇಂಥ ಕಥೆಗಳನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೊ ಇಲ್ಲವೊ ಎಂಬಂತೆ ಸವಾಲು ಒಡ್ಡುತ್ತಿವೆ.
ಇಷ್ಟವಾದ ಪ್ರಾಕಾರ?
- ಸಣ್ಣಕಥೆ ಪ್ರಾಕಾರ. ಕಥೆಗಾರನೆಂದು ಗುರುತಿಸಿಕೊಳ್ಳಲು, ಬರೆಯಲು ಮುಜುಗರದಿಂದಲಾದರೂ ಒಂದು ತೆರನಾದ ಹೆಮ್ಮೆ. ಕಾವ್ಯ, ನಾಟಕ, ಕಾದಂಬರಿ, ಗಜಲ್ ಪ್ರಾಕಾರಗಳೂ ನಂತರದಲ್ಲಿ ಇಷ್ಟ. ನಿಮ್ಮ ಸಾಹಿತ್ಯ ಮೂಡುವ ಹೊತ್ತು?- ಹೊತ್ತು ಗೊತ್ತು ಅಂತ ಹೇಳಾಕ ಬರೊಲ್ಲ. ದಿನಕ್ಕೆ 15 ಗಂಟೆ ಕೆಲಸದಲ್ಲೆ ಕಳೆಯುವ ನನಗೆ ಸಿಕ್ಕ ಸಮಯದಲ್ಲೆ ಸಾಹಿತ್ಯ ಹುಟ್ಟಬೇಕು. ಆದರೂ ಮನಸ್ಸು ವಿಶ್ರಾಂತದಲ್ಲಿ ಇರದಿದ್ದರೂ ಸುತ್ತ ಸ್ವಲ್ಪ ಗದ್ದಲವಿರಬಾರದು. ಮೊದಲಿನಿಂದಲೂ ಬಹುತೇಕವಾಗಿ ಬರೆಯುವುದಕ್ಕೆ ಮಧ್ಯರಾತ್ರಿ ಕಳೆದ ಅವಧಿಯನ್ನೇ ಆಯ್ಕೆಮಾಡಿಕೊಳ್ಳುತ್ತೇನೆ. ಬರೆಹ ಶುರುವಾಗೋದು ಮಾತ್ರ ಸಮಾಧಾನದ ಮಧ್ಯೆ ವಿಚಾರಗಳ ತಾಕಲಾಟದ ಸಂದರ್ಭದಲ್ಲಿ. ನಂತರ ಕಂಪ್ಯೂಟರ್ ಮುಂದೆ ಕುಳಿತಾಗ, ಹಾಗೆ ಕರೆಂಟ್ ಇದ್ದಾಗ ಮುಂದುವರೆಯುತ್ತೆ. ಮೂರನೇ ಕಥಾ ಸಂಕಲನದ ಕಥೆಗಳು ನಾನ್ ಪೇಪರ್ ರೂಪದಲ್ಲೆ ಮೂಡಿವೆ. ಕೀಬೋಡರ್್ನಲ್ಲೆ ಹೊಸ ಬರೆಹಗಳು ಹುಟ್ಟುತ್ತಿರುವುದು. ಮುಂದಿನ ಕೃತಿ / ಯೋಜನೆ?
- ಈ ವರ್ಷ ಕಾದಂಬರಿಯೊಂದನ್ನು ಬರೆಯಬೇಕೆಂದಿರುವೆ. ಗಟ್ಟಿ ವಿಷಯವಸ್ತುವೊಂದು ಬಹುವಾಗಿ ಕಾಡುತ್ತಿದ್ದು, ಬರೆದು ಮುಗಿಸಬೇಕಷ್ಟೆ. ಗಜಲ್ಗಳತ್ತ ಹೊರಳಿರುವ ನಾನು ಇದೇ ವರ್ಷ ಗಜಲ್ ಸಂಕಲನ ತರಲು ಬಯಸಿರುವೆ.