ಶನಿವಾರ, ಮಾರ್ಚ್ 21, 2009

ಮಠಾಧೀಶರೂ ಕೇವಲ ಮನುಷ್ಯರು!


'ಮಠಾಧೀಶರು ಸಮಾಜದ ಶತ್ರುಗಳೇ?' ಎಂಬ ಪ್ರಶ್ನೆ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಥಟ್ಟನೆ ಅನ್ನಿಸಿದ್ದು, ಮಠಾಧೀಶರೂ ಕೇವಲ ಮನುಷ್ಯರು! ಅವರೇನೂ ನಿಸರ್ಗದ ನೀತಿ ನಿಯಮಗಳಿಗೆ ವಿರುದ್ಧವಾಗಿ ಹುಟ್ಟಿದವರಲ್ಲ. ಮಠ, ಮಠಾಧೀಶ, ಧಾಮರ್ಿಕ ಕೇಂದ್ರ, ಧಮರ್ಾಧಿಕಾರಿ, ಧರ್ಮಗುರು ಇವು ಸಮಾಜದ ಅಸಮಾನತೆಯ ಸೂಚಕಗಳಲ್ಲದೆ ಬೇರೇನೂ ಅಲ್ಲ. ಮಠಾಧೀಶರು ಎಂಬ ಶಬ್ದದ ಬಳಕೆಯಿಂದ ಕೇವಲ ವೀರಶೈವ, ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯಗಳ ಧರ್ಮಗುರುಗಳು ಎಂದರ್ಥವಲ್ಲ. ಈ ಚಚರ್ೆಯಿಂದ ಒಟ್ಟಾರೆ ಎಲ್ಲಾ ಧರ್ಮಗಳ ಧರ್ಮಗುರುಗಳ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಏನು ಎಂಬುದು ಹೊರಬಿದ್ದಿದೆ. ಭೂಮಿ ಮೇಲೆ ಇರುವ ಯಾವ ವ್ಯಕ್ತಿಯೂ ಪ್ರಶ್ನಾತೀತನಲ್ಲ. ಹೀಗಿದ್ದಾಗ ಈ ಮಠಾಧೀಶರ ಬಗ್ಗೆ ಸತ್ಯ ಸಂಗತಿ ಹೊರಹಾಕಿದರೆ ಈ ಧರ್ಮಗುರುಗಳು ಯಾಕೆ 'ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರು'? ಚಿತ್ರದುರ್ಗದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ವಿದ್ವಾಂಸ ಎಲ್.ಬಸವರಾಜು ಆಡಿದ ಮಾತುಗಳು ನನ್ನಂಥ ಕುದಿ ಹರೆಯದ ಹುಡುಗರ ಬಾಯಿಂದ ಬರುವ ಮಾತುಗಳು. ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಭಾಷಣ ನಂತರ ಎದ್ದ ಗದ್ದಲದ ಅಲೆಗಳನ್ನು ಹೊರಗಿಟ್ಟರೆ ಸಾಹಿತ್ಯ ಸಮ್ಮೇಳನ ಯಶಸ್ವಿ ಎಂದು ಮಾತನಾಡಿದ ಅನೇಕ ಸೌಮ್ಯ (ಸ್ಲೋ ಪಾಯಿಸನ್)ವಾದಿಗಳು ಅರ್ಥಮಾಡಿಕೊಳ್ಳಬೇಕು. ಎಲ್.ಬಸವರಾಜು ಆ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದಕ್ಕೆ ಮತ್ತು ಅವರು, ಮಠಾಧೀಶರು ಮತ್ತು ರಾಜಕಾರಣಿಗಳು ನಮ್ಮ ಸಮಾಜದ ಶತ್ರುಗಳು' ಎಂದು ಘಂಟಾಘೋಷವಾಗಿ ಜನಸಾಮಾನ್ಯರ ದನಿಯನ್ನು ಹೊರಹಾಕಿದ್ದರಿಂದಲೇ ಆ ಸಮ್ಮೇಳನಕ್ಕೆ ವಿಶೇಷ ಅರ್ಥ ಬಂತು. ತಾವೇ ಶ್ರೇಷ್ಠ, ತಮ್ಮನ್ನು ಯಾರೂ ಪ್ರಶ್ನಿಸಬಾರದು, ಭಕ್ತರೆಂದರೆ ಕಾಣಿಕೆ ಸಲ್ಲಿಸುವ, ಕೈ, ಕಾಲು ಮುಗಿಯುವ, ಸೇವೆ ಮಾಡುವ ಮೂಢ ಹಾಗೂ ಮುಗ್ಧರು ಎಂದು ತಿಳಿಯಬೇಕೆಂಬ ಅವರ ಹಟಕ್ಕೆ ಒಂದಷ್ಟರ ಮಟ್ಟಿಗೆ ಪೆಟ್ಟು ಬಿತ್ತು. ಈ ಮಠಾಧೀಶ ಒಬ್ಬನೇ ಆದರೂ ಅವನನ್ನು ಬಹು ಬಹುವಚನಗಳಿಂದಲೇ ಸಂಬೋಧಿಸಬೇಕು. ಇದು ಯಾವ ಭಾಷೆಯ, ಯಾವ ಭಾಷಾತಜ್ಞ ಕಂಡುಹಿಡಿದ ವ್ಯಾಕಾರಣವೊ? ಮಠಗಳು ಮತ್ತು ಮಠಾಧೀಶರು ಈ ಹಿಂದೆ ಕೈಗೊಂಡ ಹಾಗೂ ಈಗ ಕೆಲವು ಮಠಗಳು ಮುಂದುವರೆಸಿದ ಸಾಮಾಜಿಕ ಸೇವೆಯನ್ನು ಗಮನಿಸಿ ಎಲ್ಲ ಮಠಗಳು ಮತ್ತು ಮಠಾಧೀಶರನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಬೇಕೆನ್ನುವುದು ಯಾವ ನ್ಯಾಯ? ಕೆಲ ಮಠಾಧೀಶರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೆ ಸಿಡಿಮಿಡಿಗೊಂಡರು. ಇಂತಹವರೇ ಈ ನಾಡಿನಲ್ಲಿ ದೇಶದಲ್ಲಿ ಹೆಚ್ಚಿದರೆ ತಮಗೆ ಪುಗ್ಸಟ್ಟೆ ಸಿಗುವ ಸ್ಥಾನ, ಮಾನ, ಗೌರವ, ಪಲ್ಲಕ್ಕಿ, ಮೆರವಣಿಗೆ, ಬಂಗಾರದ ಕಿರೀಟ, ಉತ್ಸವ, ಆರಾಧನೆ, ಲಕ್ಷದೀಪೋತ್ಸವ ಹೀಗೆ ಹಲವು ಸಂಗತಿಗಳು ಇನ್ನಿಲ್ಲವಾಗುತ್ತವಲ್ಲ ಎಂಬ ಅಳುಕು ಬಲವಾಗಿಯೇ ಕಾಡಿರಬೇಕು. ಹನ್ನೆರಡನೇ ಶತಮಾನದಲ್ಲೆ ಬಸವಾದಿ ಶರಣರು ಕಾಯಕವೇ ಕೈಲಾಸ ಎಂದರು. ಈಗಿನ ಬಹುತೇಕ ಧರ್ಮಗುರುಗಳು ಯಾವ ಕಾಯಕವನ್ನು ಮಾಡುತ್ತಿದ್ದಾರೆ. ಮತ್ತೇರಿಸುವ ಮತದ ಬೂದಿಯನ್ನೆ ಮುಗ್ಧ ಜನರಿಗೆ ಎರಚುತ್ತಿದ್ದಾರೆ. ಜನ ಮತ್ತಿನಲ್ಲಿದ್ದಾಗ ಅವರ ಮೈಮೇಲಿನ ಬಟ್ಟೆ ಬರೆಯನ್ನೂ ಬಿಡದೆ ದೋಚುವ ಕಾಯಕ ಮಾಡುತ್ತಿದ್ದಾರೆ. ಇಂಥಹವರನ್ನು ದರೋಡೆಕೋರರು ಎನ್ನದೆ ಬೇರೆ ಪದ ಬಳಸಬೇಕು ಎಂದರೆ ಇಂಥದೇ ಕೆಲಸ ಮಾಡುವ ದರೋಡೆಕೋರರು ಮತ್ತು ಕಳ್ಳಕಾಕರನ್ನು ಮಠಾಧೀಶರು ಎಂದು ಕರೆಯಬೇಕೆ? ಎಂದು ತಮಾಷೆ ಮಾಡುವುದಿಲ್ಲ. ಹಾಗೆಯೇ ಇದೆ ಹಿಂದಿನ ತಂತ್ರ. ಮಠಗಳು, ಮಠಾಧೀಶರು, ಧಾಮರ್ಿಕ ಕೇಂದ್ರಗಳು, ಧರ್ಮಗುರುಗಳು ಏನೆಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಸೇವೆ ಮಾಡುತ್ತಾ ಇವೆ ಎಂದು ಬೊಗಳೆ ಬಿಡುವವರಿಗೇನೂ ಕಡಿಮೆಯಿಲ್ಲ. ಹಾಗೆ ಸೇವೆ ಮಾಡುವುದೇ ದೊಡ್ಡ ಹೆಗ್ಗಳಿಕೆಯಲ್ಲ. 'ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು.' ದಾಸಿಮಯ್ಯನ ವಚನವನ್ನು ಮಠಾಧೀಶರನೇಕರು ತಮ್ಮ ಪುಂಖಾನುಪುಂಖ ಭಾಷಣಗಳಲ್ಲಿ ಹೇಳುವುದುಂಟು. 'ಮಾಡಿದೆನೆಂಬುದು ಮನದಲ್ಲಿ ಹೊಳೆದರೆ, ಏಡಿಸಿ ಕಾಡಿತ್ತು ಶಿವನ ಡಂಗುರ! ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ ಬೇಡಿತ್ತನೀವ ಕೂಡಲಸಂಗಮದೇವ.' ಈ ವಚನವನ್ನು ನಾನೇನು ಉಲ್ಲೇಖಿಸುವುದು ಅಗತ್ಯವಿಲ್ಲ. ಯಾಕೆಂದರೆ ಬಹುತೇಕ ಮಠಾಧೀಶರು ಇಂತಹ ನೂರಾರು ವಚನಗಳನ್ನು ಅರೆದು ಕುಡಿದವರು, ಆದರೆ ಬದುಕಲರಿಯರು ಅಷ್ಟೆ! ಹಾಗೆ ಮಠಗಳಿಂದ ಸೇವೆ ಪಡೆದ ಬಸವರಾಜು ಹಾಗೆ ಮಾತನಾಡುವ ಮುನ್ನ ವಿಚಾರ ಮಾಡಬೇಕೆಂದು ಬೊಬ್ಬೆ ಹಾಕಿದವರು ತಮ್ಮ ಅಹಮಿಕೆಯ ಪರೀಧಿಯಾಚೆ ವಿಚಾರಮಾಡಬೇಕಿತ್ತು. ಮಠಾಧೀಶರೆಂದು ಇವರನ್ನು ನಾವು ಒಪ್ಪಿಕೊಂಡರಲ್ಲವೆ ಅವರಿಗೆ ಗೌರವ, ಘನತೆ ಹೆಚ್ಚುವುದು? ಜನಸಾಮಾನ್ಯರನ್ನು ವಂಚಿಸಿ, ಕಣ್ಣಿಗೆ ಬಟ್ಟೆ ಕಟ್ಟಿ, ಹಣ, ಮದ್ಯದ ಆಮಿಷ ತೋರಿಸಿ ಚುನಾವಣೆಯ ಕಣದಲ್ಲಿ ಮೆರೆಯುವ ರಾಜಕಾರಣಿಗೂ ಇಂತಹದೇ ಬಲು ನಾಜೂಕಿನ ಭಯ, ಭಕ್ತಿಯ ನೆಪವೊಡ್ಡಿ ಸಾಮಾನ್ಯರನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡು ಮೋಸಮಾಡುವುದರಲ್ಲಿ ಯಾವುದೇ ವ್ಯತ್ಯಾಸ ಕಾಣಸಿಗದು. ಮಠಗಳು ಇಂದು ಕೇವಲ ಧರ್ಮ, ಧಮರ್ೋಪದೇಶ ಎಂಬ ವಿಷಯಗಳು ಅಡಗೂಲಜ್ಜಿ ಕಥೆಯಲ್ಲಿ ಬರುವ ಸಂಗತಿ, ಚಿತ್ರಣಗಳಂತಿಲ್ಲ. ಧರ್ಮದ ಹೆಸರಲ್ಲಿ ಅಧರ್ಮವನ್ನೇ ಸಾರುವ, ಮನುಷ್ಯತ್ವ, ಮನುಷ್ಯ ಪ್ರೀತಿಯನ್ನು ಧಿಕ್ಕರಿಸುವ, ನಿಸರ್ಗದತ್ತವಾದ ಸಮಾನತೆಗೇ ಸವಾಲಾಗುವ ಸಂಗತಿಗಳೇ ಆಗಿವೆ. ಇವತ್ತಿನ ಬಹುತೇಕ ಮಠಗಳು ರಾಜಕೀಕರಣಗೊಂಡು, ಇನ್ನೂ ಕೆಲವು ಮಠಗಳು ಕೇಸರೀಕರಣಗೊಂಡು ವಿವಿಧ ಪಕ್ಷಗಳ ಅಂಗ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಕೆಲವು ಸ್ವಾಮಿಗಳು ರಾಜಕಾರಣಿಗಳನ್ನು ಆರಾಧಿಸುವ, ಅವರ ಬಾಲಂಗೋಚಿಗಳಂತೆ ವತರ್ಿಸುವುದನ್ನು ಕಂಡರೆ ಛೀ ಅನ್ನಿಸದೆ ಇರದು. ಕೆಟ್ಟು ಕೆರ ಹಿಡಿದ ರಾಜಕಾರಣದ ಅಂಗುಲದಲ್ಲಿ ಸಿಹಿ ಅಡರಿದೆ ಎಂದು ನೆಕ್ಕುವ ಮಠಾಧೀಶರೂ ನಮ್ಮ ಸುತ್ತಲಿನ ಪ್ರಪಂಚದಲ್ಲಿರುವುದು ಅವಮಾನಕರ. ಮಠಾಧೀಶರು ಕೇವಲ ಮನುಷ್ಯರು ಎಂದೇ ನನ್ನ ಅನಿಸಿಕೆ ಶುರುಮಾಡಿದೆ. ಕಾರಣವಿಷ್ಟೆ ಅವರೂ (ಅವರಿಗೂ ಗೊತ್ತಿರುವಂತೆ) 'ಒಂದೇ ಯೋನಿಯಿಂದ ಹೊರಬಂದ ಸಾಮಾನ್ಯ ಶಿಶು'. ಗಾಂಧೀಜಿ ಹೇಳುತ್ತಿದ್ದಂತೆ, ಒಬ್ಬ ಸಾಮಾನ್ಯ ಚಮ್ಮಾರನಿಗೂ, ರಾಷ್ಟ್ರಾಧ್ಯಕ್ಷನಿಗೂ ಸ್ಥಾನ ಮಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ' ಎಂಬ ಮಾತು ಹನ್ನೆರಡನೇ ಶತಮಾನದ ಶರಣರ ವಚನಗಳಲ್ಲೂ ಧ್ವನಿಸುತ್ತದೆ. ಒಂಬಂತ್ತು ಶತಮಾನಗಳ ಹಿಂದೆಯೇ ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿಗೆ ಕರೆನೀಡಿದ ಶರಣರ ಲವಲೇಶವಾದರೂ ಇವತ್ತಿನ ಈ ಬುರುಡೆ ಸ್ವಾಮಿಗಳಲ್ಲಿ ಕಾಣಲು ಸಾಧ್ಯವೇ? ಹೀಗಿದ್ದೂ ಅವರು ಬಸವರಾಜು ಎತ್ತಿರುವ ಪ್ರಶ್ನೆಗೆ ಕೆಟ್ಟ ಕನಸು ಕಂಡವರಂತೆ ಚಿಟಾರನೆ ಚೀರಿದ್ದು, ರಚ್ಚೆ ಹಿಡಿದಿದ್ದು, ಬೀದಿಯಲ್ಲಿ ಉರುಳಾಡಿ ಅತ್ತಿದ್ದು ನನ್ನಂತವನಿಗೂ ಅವರ ದಯನೀಯ ಸ್ಥಿತಿಯನ್ನು ಕಂಡು ಅಯ್ಯೋ ಎನಿಸುತ್ತದೆ. ಯಾವುದೇ ಮಠ, ಧಾಮರ್ಿಕ ಕೇಂದ್ರ ಅಲ್ಲೇ ಗೂಟ ಬಡಿದುಕೊಂಡು ಕುಳಿತ ಖಾವಿಧಾರಿಗಳ ಬೆವರಿನ ಫಲವಲ್ಲ. ನಮ್ಮ ಮೂಢ ಸಮಾಜದ ಮುಗ್ಧ ಜನಸಮುದಾಯವನ್ನು ವಂಚಿಸಿ ವಸೂಲು ಮಾಡಿದ ಹಣದಿಂದ ನಿಮರ್ಿಸಿದವು ಎಂದು ತಿಳಿಯಬೇಕು. ದುಡಿಯಲಾರದ ವ್ಯಕ್ತಿ (ಅಸಹಾಯಕನಾಗಿದ್ದರೆ ಮಾತ್ರ) ಅನ್ನದಲ್ಲಿ ಪಾಲಿಲ್ಲ ಎಂಬ ಸಂಗತಿಯನ್ನು ಮಠಾಧೀಶರು ಗಂಭೀರವಾಗಿ ಪರಿಗಣಿಸಬೇಕು. ಕಾಯಕನಿಷ್ಠೆ ಮತ್ತು ದಾಸೋಹದ ತತ್ವಗಳನ್ನು ಗಾಳಿಗೆ ತೂರಿ ಪಡೆದ ಅನ್ನ, ಹಣ, ವಸ್ತ್ರ, ಒಡವೆ, ಗೌರವ, ಸ್ಥಾನ, ಮಾನ ಹೀಗೆ ಇನ್ನಿತರ ಸಂಗತಿಗಳು ಎಂಜಲಿನಂತೆ, ಮತ್ತೊಂದು ಅನ್ವರ್ಥಕವೆಂದರೆ ಥೇಟ್ ಅಮೇಧ್ಯ. ಜನರಿಂದ ಪಡೆದ ದುಡ್ಡಿನಲ್ಲೆ ಮಜಾ ಮಾಡುವ, ಬಡ್ಡಿಗೆ ದುಡಿಸುವ ಮಠಾಧೀಶರು ಯಾವುದೇ ಕಾಪರ್ೋರೇಟರ್ಗಳಿಗಿಂತ ಕಡಿಮೆಯೇನಲ್ಲ. ಚುನಾವಣೆಗೆ ಮುನ್ನ ರಾಜಕಾರಣಿಗಳಿಗೆ ಆಶೀರ್ವದಿಸುವ ನೆಪದಲ್ಲಿ ತಮ್ಮ ಭಕ್ತರೆನಿಸಿಕೊಂಡ ಮುಗ್ಧ ಜನರಿಂದ ಆಣೆ, ಪ್ರಮಾಣ ಮಾಡಿಸಿಕೊಂಡು ಸಂವಿಧಾನ, ಪ್ರಜಾಪ್ರಭುತ್ವದ ಆಶೋತ್ತರಗಳನ್ನೇ ಗಾಳಿಗೆ ತೂರಿ ತಮಗೆ ಬೇಕಾದವರ ಪರ ಮತ ಯಾಚಿಸುವ ಮಠಾಧೀಶರು ರೌಡಿಗಳು, ಸುಪಾರಿ ಕೊಲೆಗಾರರಷ್ಟೇ ಅಪಾಯಕಾರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ನಂತರ ಇಂಥದೆ ಮಠದ ಮಠಾಧೀಶರ ಆಶೀವರ್ಾದದಿಂದ ತಾವು ಗೆದ್ದೆವು, ಆ ಮಠದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಕೊಡುವುದಾಗಿ (ಅದು ಅವರಪ್ಪನ ಮನೆಯ ದುಡ್ಡಾಗಿದ್ದರಲ್ಲವೆ?) ಹೇಳುವ ರಾಜಕಾರಣಿಗಳು, ಮಠಾಧೀಶರು ಮತ್ತು ಮಂತ್ರವಾದಿಗಳ ಅಣತಿಯಂತೆಯೇ ಸಕರ್ಾರ ನಡೆಸುವ ಮಂತ್ರಿ ಮಹೋದಯರು ನಮ್ಮ ನಾಡಿನಲ್ಲಿರುವುದೇ ಅತ್ಯಂತ ದುದರ್ೈವದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಎಲ್.ಬಸವರಾಜು ಹೊರಹಾಕಿದ ವಿಷಯಗಳು ಇನ್ನೂ ಕೇವಲ ಮೇಲ್ಪಪದರ ಅನಿಸಿಕೆಗಳು. ಈ ನೆಲದ ಜನ ಸಮುದಾಯ ಸಾವಿರಪಟ್ಟು ಅಸಹನೆ, ಸಿಟ್ಟು ಹೊಂದಿದ್ದಾರೆ. ಜನರಿಂದ, ಜನರಿಗಾಗಿ, ಜನರ ಸಕರ್ಾರವಾಗಬೇಕಿದ್ದ ಸಕರ್ಾರಗಳು ಕೇವಲ ಧರ್ಮದ, ಧರ್ಮಗುರುಗಳ, ಮಠಗಳ, ಮಠಾಧೀಶರ, ಹಣವಂತರ, ವಿದೇಶಿ ಕಂಪೆನಿಗಳ ಸಕರ್ಾರವಾಗಿರುವುದು ಖೇದನೀಯ. ಕೇವಲ ವೀರಶೈವ, ಬ್ರಾಹ್ಮಣ, ಲಿಂಗಾಯತ ಸಮುದಾಯಗಳ ಧರ್ಮಗುರುಗಳಿಗೇ ಮಾತ್ರ ಎಲ್.ಬಸವರಾಜು ಅವರ ಮಾತುಗಳು ಅನ್ವಯಿಸುತ್ತವೆ ಎಂದಲ್ಲ. ಧರ್ಮದ ಅಫೀಮು ಕುಡಿಸಿ, ತಾವು ಅಮೃತ ಸವಿಯುವ ಐಷಾರಾಮಿ ಹಾಗೂ ಖಾವಿಯೊಳಗೇ (ಇದು ಬಿಳಿ, ಹಸಿರು ಬಟ್ಟೆ ತೊಡುವವರಿಗೂ ಅನ್ವಯಿಸುತ್ತದೆ ಎಂದು ಬೇರೆ ಹೇಳಬೇಕಿಲ್ಲ) ಕಲರ್ ಕಲರ್ ಕನಸು ಕಾಣುವ ಧರ್ಮಗುರುಗಳು ಸ್ವಲ್ಪ ತಮ್ಮ ಮನದ ಕಿಟಕಿ ಸಮೀಪ ನಿಂತು ತಮ್ಮ ಅಂತರಾಳದ ನುಡಿಗಳನ್ನು ಚಿತ್ತದಿಂದ ಆಲಿಸಬೇಕಿದೆ. ತಾವು ಈ ಸಮಾಜಕ್ಕೆ ನೀಡಿರುವುದಾದರೂ ಏನು? ಪಡೆದುದಾರೂ ಏನು? ತಾವು ಇಂತಹ ಸ್ಥಾನ, ಗೌರವ, ಪ್ರತಿಷ್ಠೆಗೆ ಅರ್ಹರೆ? ತಾವೂ ಯಾಕೆ ಸಾಮಾನ್ಯರಂತೆ ಕೂಲಿಯನ್ನಾದರೂ ಮಾಡಿ ಹೊಟ್ಟೆ ಹೊರೆಯಬಾರದು? ಬೇರೆಯವರ ಭಿಕ್ಷೆಯಲ್ಲಿ, ಮೋಸದಿಂದ ದೋಚಿದ ಹಣದಿಂದ ಎಷ್ಟು ದಿನ ಬದುಕುವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಕೊನೆಯಲ್ಲಿ ಹೇಳುವುದಿಷ್ಟೆ, ಇಂತಹ ಮುಕ್ತ ಚಚರ್ೆಗೆ ಅವಕಾಶ ಮಾಡಿಕೊಟ್ಟ 'ಅಗ್ನಿ' ಬಳಗ ನಿಜಕ್ಕೂ ಅಭಿನಂದನೀಯ. ಇದು ಕೇವಲ ಎಲ್.ಬಸವರಾಜು ಪರ ಎನಿಸದೆ, ಇಡೀ ನಾಡಿನ ಸಮಸ್ತ ಜನಸಮುದಾಯದ ಅಂತರಾಳದ ಆಶಯ. ಈ ಸುದೀರ್ಘ ಸಂವಾದದಲ್ಲಿ ಚಚರ್ೆಯಾದ ಅನಿಸಿಕೆಗಳು ಪುಸ್ತಕ ರೂಪದಲ್ಲಿ ಹೊರಬಂದು ಎಲ್ಲ ಧಾಮರ್ಿಕ ಕೇಂದ್ರಗಳನ್ನು, ಧರ್ಮಗುರುಗಳು ತಲುಪಲಿ. ಆ ಮೂಲಕ ಅವರನ್ನು ಆಗಾಗ್ಗೆ ಬೆಚ್ಚಿ ಬೀಳಿಸುವ ಬೆತ್ತಗಳಾಗಲಿ. ಹಾಗೆ ಆದಾಗಲೇ ಈ ಸಂವಾದಕ್ಕೆ ವಿಶೇಷ ಅರ್ಥ ಬರುತ್ತದೆ.

-ಕಲಿಗಣನಾಥ ಗುಡದೂರು, ಸಿಂಧನೂರು

4 ಕಾಮೆಂಟ್‌ಗಳು:

  1. very good gudadur. avarU namma nimmante anna tinnuva, kakka maaduv kEvala naramnuxyaru maatra.

    ಪ್ರತ್ಯುತ್ತರಅಳಿಸಿ
  2. ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  3. ಗುಡದೂರು, ತಮಗೂ ಈ ಸುದ್ದಿ ಮುಟ್ಟಿತೆ? ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ದಿನಪತ್ರಿಕೆಗಳಲ್ಲಿ ಈ ಸುದ್ದಿ ಕಂಡು ಬರಲಿಲ್ಲ.

    ಉಡುಪಿಯ ಮಿತ್ರರಿಂದ ಬಂದ ಸುದ್ದಿ. ಪೇಜಾವರರ ಆತ್ಮಚರಿತ್ರೆ ಕೇಂದ್ರದಲ್ಲಿ ಸರಕಾರ ರಚನೆಯ ಪ್ರಕ್ರಿಯೆ ಮುಗಿದ ತಕ್ಷಣವೇ ಬಿಡುಗಡೆಯಾಗುತ್ತದೆಯಂತೆ! ಚುನಾವಣೆಗಿಂತ ಮೊದಲೇ ಪ್ರಕಟಣೆಗೆ ಸಿದ್ಧವಾಗಿದ್ದರೂ ಸಹ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳಿಂದ ಬಿ. ಜೆ. ಪಿ. ಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸರಕಾರ ರಚನೆಯಾಗುವವರೆಗೂ ಪ್ರಕಟಣೆ ಬೇಡ ಎಂದು ನಿರ್ಧರಿಸಲಾಗಿದೆಯಂತೆ. ಆತ್ಮಚರಿತ್ರೆಗೆ ಬೆನ್ನುಡಿಯನ್ನು ಬಿ. ಜೆ. ಪಿ. ನಾಯಕ ಅಡ್ವಾನಿ ಬರೆದಿದ್ದಾರಂತೆ. ಪ್ರಸ್ತಾವನೆಯನ್ನು ಪೇಜಾವರರನ್ನು ಹತ್ತಿರದಿಂದ ಬಲ್ಲ ಅನಂತಮೂರ್ತಿಯವರಿಂದ ಬರೆಸುವ ಇಚ್ಛೆ ಪೇಜಾವರರಿಗೆ ಇದ್ದರೂ ಅವರ ಸಹವರ್ತಿಗಳು ಮಾಧ್ವರೇ ಪ್ರಸ್ತಾವನೆಯನ್ನು ಬರೆದರೆ ಮಿಕ್ಕವರು ಪುಸ್ತಕವನ್ನು ಅಲಕ್ಷೆ ಮಾಡಬಹುದು ಎಂದು ಆಭಿಪ್ರಾಯಪಟ್ಟರಂತೆ. ಕೊನೆಗೆ ಪೇಜಾವರರ ದಲಿತ ಪರ ಕಾರ್ಯಕ್ರಮಗಳಿಗೆ ಸಹಾನುಭೂತಿ ಹೊಂದಿರುವ ದಲಿತ ಕವಿಯೊಬ್ಬರಿಂದ ಬರೆಸಿದರಂತೆ. ಪುಸ್ತಕದಲ್ಲಿ ರಾಮಜನ್ಮಭೂಮಿ ಚಳವಳಿಯ ಕಾಲದ ವಿವರಗಳೂ ಸಹಿತ ಅನೇಕ ವಿವಾದಾತ್ಮಕ (ಹಾಗೂ ರೋಚಕ?) ಸಂಗತಿಗಳಿವೆಯಂತೆ. ಸಾಹಿತ್ಯ ಲೋಕದ ದಿಗ್ಗಜರ ಬಗ್ಗೂ ಸಾಕಷ್ಟು ನಿಷ್ಠುರವಾಗಿ ಬರೆದಿದ್ದಾರಂತೆ! ಭರ್ಜರಿ ಸಾರ್ವಜನಿಕ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಯಾದ ಬಳಿಕ ಪ್ರತಿ ವಾರವೂ ಮರುಮುದ್ರಣ ಆಗಿ ದಾಖಲೆಗಳನ್ನು ಮುರಿಯುವ ಬಗ್ಗೆ ಉಡುಪಿ ಮಠದ ವಟುಗಳಿಂದ ಹಿಡಿದು ಅಡಿಗೆಯ ಮಾಣಿಗಳೂ ಕನಸು ಕಾಣುತ್ತದ್ದಾರಂತೆ. ಅಂತೂ ಉಡುಪಿ ಮಠದ ಸ್ವಾಮಿಗಳೊಬ್ಬರು ಆತ್ಮಚರಿತ್ರೆ ಬರೆಯುವುದರ ಮೂಲಕ ನಾಡಿನ ವಿದ್ಯಮಾನಗಳಲ್ಲಿ ಹೊಸ ಸಂಚಲನವೇ ಉಂಟಾಗಲಿದೆ ಎಂದು ಸುದ್ದಿ ಕೊಟ್ಟ ಮಿತ್ರರ ಅಂಬೋಣ.

    ಪ್ರತ್ಯುತ್ತರಅಳಿಸಿ